ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಗೋವಿಂದ ಭಟ್ಟರು ಸಿದ್ಧಿಯಿಂದ ಪ್ರಸಿದ್ಧಿಗೇರಿದ ಶ್ರೇಷ್ಟ ಕಲಾವಿದ : ಎಸ್. ವಿ. ಉದಯಕುಮಾರ ಶೆಟ್ಟಿ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಶನಿವಾರ, ಮೇ 7 , 2016
ಮೇ 7 , 2016

ಗೋವಿಂದ ಭಟ್ಟರು ಸಿದ್ಧಿಯಿಂದ ಪ್ರಸಿದ್ಧಿಗೇರಿದ ಶ್ರೇಷ್ಟ ಕಲಾವಿದ : ಎಸ್. ವಿ. ಉದಯಕುಮಾರ ಶೆಟ್ಟಿ

ಕೆಂಜೂರು : “ವಿದ್ಯೆ ಮತ್ತು ವಿನಯತೆ ಒಬ್ಬ ವ್ಯಕ್ತಿಯಲ್ಲಿ ಹಾಸುಹೊತ್ತಾದಾಗ ವ್ಯಕ್ತಿ ಪರಿಪೂರ್ಣನಾಗುತ್ತಾನೆ. ತೆಂಕು ಬಡಗುತಿಟ್ಟಿನ ಕಲಾವಿದರಿಗೆ ಆದರ್ಶ ಮಾದರಿಯಾಗಬಲ್ಲ ಕೆ. ಗೋವಿಂದ ಭಟ್ಟರು ತನ್ನ ವಿಧೇಯತೆ ವಿನಯತೆಗಳಿಂದ ಕಲಾಭಿಮಾನಿಗಳ ಮನಸ್ಸನ್ನು ಗೆದ್ದವರು. ತನ್ನ ಪ್ರಾಮಾಣಿಕ ಪರಿಶ್ರಮದಿಂದ ಎಪ್ಪತ್ತೈದರ ಇಳಿ ವಯಸ್ಸಿನಲ್ಲೂ ಯುವಕರನ್ನು ನಾಚಿಸಬಲ್ಲ ಅಭಿನಯದಲ್ಲಿ ಯಕ್ಷಗಾನ ರಂಗದಲ್ಲಿ ಮೇರು ಕಲಾವಿದರಾಗಿ ಗುರುತಿಸಿಕೊಂಡವರು. ಸಿದ್ಧಿಯಿಂದ ಪ್ರಸಿದ್ಧಿಗೇರಿದ ತೆಂಕುತಿಟ್ಟಿನ ದಶಾವಾತಾರಿ ಎಂದು ಅವರನ್ನು ಗುರುತಿಸಬಹುದು“ ಎಂದು ಮಣಿಪಾಲ ಎಂ. ಐ. ಟಿ ಪ್ರಾಧ್ಯಾಪಕ, ಯಕ್ಷಗಾನ ಚಿಂತಕ ಪ್ರೊ. ಎಸ್. ವಿ. ಉದಯ ಕುಮಾರ ಶೆಟ್ಟರು ಹೇಳಿದರು.

ಅವರು ಕೆಂಜೂರು ಬಲ್ಲೆಬೈಲುನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳದ ವೇದಿಕೆಯಲ್ಲಿ ಹಿರಿಯ ಕಲಾವಿದ ಕೆ. ಗೋವಿಂದ ಭಟ್ ಮತ್ತು ಮೇಳದ ಪ್ರಭಂದಕ ಗಿರೀಶ್ ಹೆಗ್ಡೆಯವರ ಸನ್ಮಾನ ಸಮಾರಂಭದಲ್ಲಿ ಅಭಿನಂದನಾ ಮಾತನ್ನಾಡಿದರು. ಸನ್ಮಾನ ನೆರವೇರಿಸಿ ಮಾತನಾಡಿದ ಸಾಲಿಗ್ರಾಮ ಮೇಳದ ವ್ಯವಸ್ಥಾಪಕ ಪಿ. ಕಿಷನ್ ಹೆಗ್ಡೆಯವರು ಕಲಾವಿದರೊಂದಿಗೆ ಮೇಳದ ಸಿಬ್ಬಂದಿ ವರ್ಗವನ್ನು ಗುರುತಿಸುವುದು ಅರ್ಥಪೂರ್ಣ ಎಂದರು.

ಕಾರ್ಯಕ್ರಮ ವ್ಯವಸ್ಥಾಪಕ ಶೇಖರ ಶೆಟ್ಟಿಯವರು ಹಿರಿಯ ಕಲಾವಿದರಾದ ಕುಂಬ್ಳೆ ಶ್ರೀಧರ ರಾವ್ ಮತ್ತು ಕೆದಿಲ ಜಯರಾಮ ಭಟ್ಟರನ್ನು ಸನ್ಮಾನಿಸಿದರು. ನಾಲ್ಕೂರು ಇಂಗ್ಲೀಷ್ ಮೀಡಿಯಮ್ ಶಾಲೆಯ ಅದ್ಯಕ್ಷ ದಿನೇಶ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಶಿಧರ ಶೆಟ್ಟಿ ಕಾರ್ಯಕ್ರಮ ಸಂಯ್ಯೋಜಿಸಿ ವಂದಿಸಿದರು. ಬಳಿಕ ಶ್ರೀ ಧರ್ಮಸ್ಥಳ ಮೇಳದವರಿಂದ ``ಧರ್ಮಸ್ಥಳ ಕ್ಷೇತ್ರ ಮಹಾತ್ಮೆ `` ಯಕ್ಷಗಾನ ನೆರವೇರಿತು.





Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಶ್ರೀರಾಮ ಡೋಂಗ್ರೆ(5/9/2016)
ಬಾಗುವವರು ಮಾಗುತ್ತಾರೆ. ಮಾಗಿದವರು ಬಾಗುತ್ತಾರೆ. ಫಲಭರಿತ ಮರವು ಮಾತ್ರ ಬಾಗಬಲ್ಲುದು. ವಿದ್ಯೆ ವಿನಯವನ್ನು ಕೊಡುತ್ತದೆ. ವಿನಯದಿಂದ ಅರ್ಹತೆ ದೊರೆಯುತ್ತದೆ. ಅರ್ಹತೆಯಿಂದ ಸಂಪತ್ತು, ಸಂಪತ್ತಿನಿಂದ ಸನ್ನಡತೆ, ಸನ್ನಡತೆಯಿಂದ ಸುಖ ಇದು ತಿಳಿದವರ ಮಾತು. ಏಷ್ಟು ಸಲ ಓದಿದರೂ ತಿಳಿಯದ ಈ ಮಾತುಗಳು ಅರ್ಥವಾಗಲು ಶ್ರೀ ಗೋವಿಂದ ಭಟ್ಟರ ನಾಕು ನಡೆಯೇ ಸಾಕು.




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ